ಏಸು ಕಾಯಂಗಳ ಕಳೆದು ಎಂಭತ್ನಾಲ್ಕು ಲಕ್ಷ
ಜೀವ ರಾಶಿಯನ್ನು ದಾಟಿ ಬಂದ ಈ ಶರೀರ ||
ತಾನಲ್ಲ ತನ್ನದಲ್ಲ ಆಸೆ ತರವಲ್ಲ , ಮುಂದೆ ಬಾಹೋದಲ್ಲ
ದಾಸನಾಗು ವಿಶೇಷನಾಗು ||
ಆಶ ಕ್ಲೇಶ್ ದೊಷೆವೆoಭ ಅರ್ಥಿಯೋಳು ಮುಳುಗಿ
ಯಮನ ಪಾಶಕ್ಕೊಳಗಾಗದೆ ನಿರ್ದೊಶಿಯಾಗು ಸಂತೂಷಿಯಾಗು||
ಕಾಶಿ ವಾರಾಣಸಿ ಕಂಚಿ ಕಾಳಹಸ್ತಿ ರಮೇಶ್ವರ್
ಎಸು ದೇಶ ತಿರುಗಿದರು ಬಾಹೂದೇನೂ ಅಲ್ಲಿಗ್ ಹೋದೆನು ||
ದೂಷನಾಶ್ ಕೃಷ್ಣವೇಣಿ ಗಂಗೆ ಗೋದಾವರಿ ಭವ
ನಾಶಿ ತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ ||
ಮೀಸಲಾಗಿ ಮಿಂದು ಜಪ ತಪ ಹೋಮ ನೆಮಗಳ
ಎಸು ಬಾರಿ ಮಾಡಿದರ ಫಲವೇನು ಈ ಛಲವೇನು ||
ಅಂದಿಗೂ ಇಂದಿಗೂ ಒಮ್ಮೆ ಸಿರಿ ಕಮಲೇಅಶನ್ನನು
ಒಂದು ಬಾರಿ ಹಿಂದ ಯಾರು ಹಿಂಗ ನೆನಯಲಿಲ್ಲ ಮನ ದನಿಯಲಿಲ್ಲ ||
ಬಂದು ಬಂದು ಭ್ರಹಮೆಗೊಂಡು ಮಾಯಾ ಮೋಹಕ್ಕೆ ಸಿಕ್ಕಿ
ನೊಂದು ಬೆಂದು ಒಂದರಿಂದ ಉಳಿಯಲಿಲ್ಲ ದ್ವಂದ್ವ ಕಲಿಯಲ್ಲಿಲ್ಲ ||
ಸಂದೇಹವ ಮಾಡಿದರು ಅರಿಯು ಎಂಭ ದೀಪವಿಟ್ಟು
ಇಂದು ಕಂಡ್ಯ ದೇಹದಲ್ಲಿ ಪೀoಡಾoಡ ಹಾಗೆ ಬ್ರಹ್ಮಾಂಡ ||
ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ
ಮುಕುಂಧನೀಂದ ಮುಕ್ತಿ ಬೇಡುಕಂಡ್ಯ ನೀ ನೋಡುಕಂಡ್ಯ ||
ಮೂರುಬಾರಿ ಶರಣು ಮಾಡಿ ನೇರ ಮುಳುಗಲ್ಲ್ಯಾಕೆ
ಪರನರಿಯರ ನೋಟಕ್ಕೆ ಗುರಿಯ ಮಾಡಿದಿ ಮನ ಸೆಳೆಯ ಮಾಡಿದಿ ||
ಸುರೆಯೋಳು ಸುರೆ ತುಂಬಿ ಮೇಲೆ ಹಾವಿನ ಹಾರ
ಗೀರು ಗಂಧ ಅಕ್ಷತೆಯ ಧರಿಸಿದಂತೆ ನೀ ಮರೆಸಿದಂತೆ||
ಗಾರುಡಿಯ ಮಾತ ಬಿಟ್ಟು ನಾದ ಬ್ರಹ್ಮನ ಪಿಡಿದು
ಸಾರಿ ಸುರಿ ಮುಕ್ತಿಯನ್ನು ಶಮನದಂತೆ ಮತ್ತೆ ಸಮನದಿಂದ ||
ನಾರಾಯಣ ಅಚುತ್ಯ ಅನಂತಾದಿ ಕೇಶವನ
ಸಾರಮ್ರಥವನ್ನು ಉಂಡು ಸುಖಿಸೋ ಲಂಡ ಜೀವವೇ ಎಲೋ ಭಂಡ ಜೀವವೇ ||
Esu kayangala kaledu embhatnalku laksa
jiva rasiyannu dati banda i sarira||
Tanalla tannadalla ase taravalla, munde bahodalla
dasanagu visesanagu||
asa kles doseveobha arthiyolu mulugi
yamana pasakkolagagade nirdosiyagu santusiyagu||
Kasi varanasi kan̄ci kalahasti ramesvar
esu desa tirugidaru bahudenu allig hodenu||
Dusanas kr̥snaveni gange godavari bhava
nasi tungabhadre yamune vasadalli upavasadalli||
Misalagi mindu japa tapa homa nemagala
esu bari madidara phalavenu i chalavenu||
Andigu indigu omme siri kamaleasannanu
ondu bari hinda yaru hinga nenayalilla mana daniyalilla||
Bandu bandu bhrahamegondu maya mohakke sikki
nondu bendu ondarinda uliyalilla dvandva kaliyallilla||
Sandehava madidaru ariyu embha dipavittu
indu kandya dehadalli piodaoda hage brahmanda||
Indu hariya dhyanavannu madi vivekadi
mukundhaninda mukti bedukandya ni nodukandya||
Murubari saranu madi nera mulugallyake
paranariyara notakke guriya madidi mana seleya madidi||
Sureyolu sure tumbi mele havina hara
giru gandha aksateya dharisidante ni maresidante||
Garudiya mata bittu nada brahmana pididu
sari suri muktiyannu samanadante matte samanadinda||
Narayana acutya anantadi kesavana
saramrathavannu undu sukhiso landa jivave elo bhanda jivave||