ಬಾನನ ಭಂಗಿಸಿದಂತ ಭಾವಜನಯ್ಯನೆ ಬಾರೋ !2!
ವೇನು ನಾದ ಬಾರೋ ವೆಂಕಟರಮಣನೆ ಬಾರೋ!2!
ಪೂತನಿಯ ಮೊಳೆಯುಂಡ ನವನೀತ ಚೋರನೆ ಬಾರೋ!2!
ಭೀಕ ರಾವನನ ಸಂಹರಿಸಿದ ಸೀತಾ ನಾಯಕ ಬಾರೋ!2!
ವೇನು ನಾದ ಬಾರೋ ವೆಂಕಟರಮಣನೆ ಬಾರೋ!2!
ಬಿಲ್ಲ ಮುರಿದು ಮಳ್ಳರ ಗೆದ್ದ ಬುಲ್ಲ ನಾಭನೆ ಬಾರೋ!2!
ಗೊಲ್ಲ ತೇರೊಡನೆ ನಲಿವ ಚೆಲುವ ಮೂರುತಿ ಬಾರೋ!2!
ವೇನು ನಾದನೆ ಬಾರೋ ವೆಂಕಟರಮಣನೆ ಬಾರೋ!2!
ಮಂದರ ಗಿರಿಯೆತಿದಂತ ಇಂದಿರರಮನನೆ ಬಾರೋ!2!
ಕುಂದದೆ ಗೋವುಗಳ ಕಾಯ್ದ ಪುಂಡರಿಕಾಕ್ಷ ಬಾರೋ!2!
ವೇನು ನಾದನೆ ಬಾರೋ ವೆಂಕಟರಮಣನೆ ಬಾರೋ ಬಾರೋ ಬಾರೋ ಬಾರೋ!
ನಾರಿಯರಮನೆಗೆ ಹೋಗುವ ವಾರಿಜನಾಭನೆ ಬಾರೋ!2!
ಇರೇಳು ಭುವನವ ಕಾಯುವ ಮಾರನಯ್ಯನೆ ಬಾರೋ ಬಾರೋ ಬಾರೋ
ವೇನು ನಾದ ಬಾರೋ ವೆಂಕಟರಮಣನೆ ಬಾರೋ
ಶೇಶಶಯನ ಮೂರುತಿಯಾದ ವಾಸುದೇವ ನೆ ಬಾರೋ!2!
ದಾಸರೊಳು ದಾಸನಾದ ಪುರಂದರ ವಿಠಲ ಬಾರೋ!2!
ವೇನು ನಾದ ಬಾರೋ ವೆಂಕಟರಮಣನೆ ಬಾರೋ
ವೇನು ನಾದ ಬಾರೋ ವೆಂಕಟರಮಣನೆ ಬಾರೋ!!