ಧಣಿಯಾ ನೋಡಿದೆನೋ ವೆಂಕಟನ

ಧಣಿಯಾ ನೋಡಿದೆನೋ ವೆಂಕಟನ
ಮನಧಣಿಯಾ ನೋಡಿದೆನೋ ಶಿಖಾಮಣಿ ತಿರುಮಲನಾ

ಚರಣ ದಂದುಗೆ ಗೆಜ್ಜೆಯವನ
ಪಿತಾಂಬರ ಉಡಿಗೆ ವೊಡ್ಯಾನವಿಟ್ಟಿಹನ
ಮೆರೆಯುವ ಮಾಣಿಕ್ಯ ವದನಾ
ಚೆನ್ನ ಸರ ಹಾರ ಪದಕ ಕೌಸ್ತುಭ ಧರಿಸಿಹನಾ
ಧ |

ಕೊರಳೊಳು ವೈಜಯಂತಿ ಧರಿಸಿಹನ
ಕಿರು ಬೆರಳ ಮುದ್ರಿಕೆ ಭುಜ ಕೀರ್ತಿ ಒಪ್ಪುವನ
ಅರಳು ಕಣ್ಗಳ ನೋಟದವನ
ಸುಳಿ ಗುರುಳು ನೊಸಲಾಪಟ್ಟಿ ನಾಮ ಇಟ್ಟಹನ
ಧ |

ಶಂಖ ಚಕ್ರವ ಪಿಡಿದಿಹನಾ
ಕೈ ಕಂಕಣ ತೊಳ್ಬಂದಿ ಬಾಪುರಿಯವನಾ
ಶಂಖನೂದುವ ಸರ್ವೋತ್ತಮನ
ಭುವೈಕುಂಠವಿದೆಂದು ಹಸ್ತದಿ ತೋರಿಸುವನ
ಧ |

ಕೆಸಕ್ಕಿ ಅನ್ನ ಉಂಬುವನ
ಬಡ್ಡಿ ಕಾಸು ಬಿಡದಹಾಗೆ ಕೂಡಿ ಹಾಕುವನಾ
ಘೊಷನಾದಕ್ಕೆ ವೊಲಿದಿಹನ
ಮೈಯೊಳು ಸುಸುವ ಗಂಧ ಕಸ್ತುರಿಲೆಪಿತನಾ
ಧ |

ನೀಟಾದ ವಲ್ಲಿ ಹೊದ್ದಿಹನ
ಹೊರ ಬೇಟೆಯಾಡಿ ಅಂದದಿಂದ ಬರುವನ
ನೋಟದಿ ಬಂದು ನಿಂತಿಹನ
ಈ ಶ್ರಿಷ್ಟಿ ಒಡೆಯ ಪುರಂದರ ವಿಠಲನ್ನ
ಧ |

Leave a Reply

*

This site uses Akismet to reduce spam. Learn how your comment data is processed.