ಇಷ್ಟು ದಿನ ಈ ವೈಕುಂಠ (Ishtu Dina ee vaikunta)

ಇಷ್ಟು ದಿನ ಈ ವೈಕುಂಠ
ಎಷ್ಟು ದೂರವೋ ಎನುತಲಿದ್ದೆ
ದೃಷ್ಟಿಯಿಂದಲಿ ನಾನು ಕಂಡೆ
ಸೃಷ್ಟಿಗೀಶನೇ ಶ್ರೀರಂಗಶಾಯಿ ||1||
ಎಂಟು ಏಳನು ಕಳೆದುದರಿಂದ
ಬಂಟರೈವರ ತುಳಿದುದರಿಂದ
ಕಂಟಕನೊಬ್ಬನ ತರಿದುದರಿಂದ
ಬಂಟನಾಗಿ ಬಂದನೋ ಶ್ರೀರಂಗಶಾಯಿ ||2||ವನ ಉಪವನಗಳಿಂದ
ಘನ ಸರೋವರಗಳಿಂದ
ಕನಕ ಗೋಪುರಗಳಿಂದ
ಘನಶೋಭಿತನೆ ಶ್ರೀರಂಗಶಾಯಿ ||3||ವಜ್ರ ವೈಢೂರ್ಯದ ತೊಲೆಗಳ ಕಂಡೆ
ಪ್ರಜ್ವಲಿಪ ಮಹಾದ್ವಾರವ ಕಂಡೆ
ನಿರ್ಜರಾದಿ ಮುನಿಗಳ ಕಂಡೆ
ದುರ್ಜನಾಂತಕನೆ ಶ್ರೀರಂಗಶಾಯಿ ||4||

ರಂಭೆ ಊರ್ವಶಿಯರ ಮೇಳವ ಕಂಡೆ
ತುಂಬುರು ಮುನಿ ನಾರದರನು ಕಂಡೆ
ಅಂಬುಜೋದ್ಭವ ರುದ್ರರ ಕಂಡೆ
ಶಂಬರಾರಿಪಿತನೆ ಶ್ರೀರಂಗಶಾಯಿ ||5||

ನಾಗಶಯನನ ಮೂರುತಿ ಕಂಡೆ
ಭೋಗಿಭೂಷಣ ಶಿವನನು ಕಂಡೆ
ಭಾಗವತರ ಸಮ್ಮೇಳವ ಕಂಡೆ
ಕಾಗಿನೆಲೆಯಾದಿಕೇಶವ ಶ್ರೀರಂಗಶಾಯಿ ||6||

2 comments

ಏಳು ಜನ್ಮಗಳಲ್ಲಿ ಒಂದೊಂದು ಜನ್ಮವೂ ” ಕಂಟಕ” ಗಳಂತೆ ಕಳೆದರೆ
(ಎಂಟು ಕಂಟಕ )
ಬಂಟರೈವರು – ಪಂಚೇಂದ್ರಿಯಗಳು ಸಾಧನೆಗೆ
ಸಹಾಯಕರೂ ಹೌದು , ಆದರೆ
ಅವನ್ನು ಗೆದ್ದಾಗ ಮಾತ್ರ ಮೋಕ್ಷ ಕೊನೆಯದಾಗಿರುವ (ಮೋಕ್ಷಕ್ಕೆ ) ಕಂಟಕ ಒಂದು ಎಂದರೆ ಅದು ಅಹಂಕಾರ ಅದನ್ನು ಬಿಟ್ಟರೆ ಶ್ರೀ ರಂಗ
ನೇ ನಮ್ಮ ಮೋಕ್ಷಕ್ಕೆ ಸಹಾಯ ಮಾಡುತ್ತಾನೆ ಆಗ
ಶ್ರೀ ರಂಗನ ವೈಕುಂಠ ದ ದಾರಿ ದೂರವಿಲ್ಲ , ಭಗವಂತನನ್ನೇ ಪಡೆಯುತ್ತೇವೆ

ಕಂಟಕ ಪ್ರಾಯವಾದ ಏಳು ಜನ್ಮಗಳು .
ಏಳು ಜನ್ಮಗಳಲ್ಲಿ ಒಂದೊಂದು ಜನ್ಮವೂ ” ಕಂಟಕ” ಗಳಂತೆ ಕಳೆದರೆ (ಎಂಟು ಕಂಟಕ ) ಬಂಟರೈವರು – ಪಂಚೇಂದ್ರಿಯಗಳು ಸಾಧನೆಗೆ ಸಹಾಯಕರೂ ಹೌದು , ಆದರೆ ಅವನ್ನು ಗೆದ್ದಾಗ ಮಾತ್ರ ಮೋಕ್ಷ ಕೊನೆಯದಾಗಿರುವ (ಮೋಕ್ಷಕ್ಕೆ ) ಕಂಟಕ ಒಂದು ಎಂದರೆ ಅದು ಅಹಂಕಾರ ಅದನ್ನು ಬಿಟ್ಟರೆ ಶ್ರೀ ರಂಗ ನೇ ನಮ್ಮ ಮೋಕ್ಷಕ್ಕೆ ಸಹಾಯ ಮಾಡುತ್ತಾನೆ ಆಗ ಶ್ರೀ ರಂಗನ ವೈಕುಂಠ ದ ದಾರಿ ದೂರವಿಲ್ಲ , ಭಗವಂತನನ್ನೇ ಪಡೆಯುತ್ತೇವೆ

ನಿಮ್ಮದೊಂದು ಉತ್ತರ

*

This site uses Akismet to reduce spam. Learn how your comment data is processed.