ರಾಘವೇಂದ್ರ ಗುರುರಾಯರ ಸೇವಿಸಿರೋ

ರಾಘವೇಂದ್ರ ಗುರುರಾಯರ ಸೇವಿಸಿರೋ ರಾಘವೇಂದ್ರ ಗುರುರಾಯರ ಸೇವಿಸಿರೋ | ಸೌಖ್ಯದಿ ಜೀವಿಸಿರೋ ||ಪ||

ತುಂಗಾತೀರದಿ ರಘುರಾಮನ ಪೂಜಿಪ | ನರಸಿಂಗರ ಭಜಕರೋ ||ಅ.ಪ||

ಶ್ರೀ ಸುಧೀಂದ್ರ ಕರ ಸರೋಜ ಸಂಜಾತ | ಜಗದೊಳಗೆ ಪುನೀತ |

ದಾಶರಥಿಯ ದಾಸತ್ವವ ತಾನ್ವಹಿಸಿ | ದುರ್ಮತಗಳ ಜಯಿಸಿ |

ಈ ಸಮೀರ ಮತ ಸಂಸ್ಥಾಪಕರಾಗಿ | ನಿಂದಕರನು ನೀಗಿ |

ಭೂಸುರರಿಗೆ ಸಂಸೇವ್ಯ ಸದಾಚರಣೀ | ಕಂಗೊಳಿಸುವ ಕರುಣಿ ||೧||

ಕುಂದದೆ ವರ ಮಂತ್ರಾಲಯದಲ್ಲಿರುವ | ಕರೆದಲ್ಲಿಗೆ ಬರುವ |

ವೃಂದಾವನಗತ ಮೃತ್ತಿಗೆ ಜಲ ಪಾನ | ಮುಕ್ತಿಗೆ ಸೋಪಾನ |

ಸಂದರುಶನ ಮಾತ್ರದಲಿ ಮಹತ್ಸಾಪ | ಬಡಿದೋಡಿಸಲಾಪ |

ಮಂದಭಾಗ್ಯರಿಗೆ ದೊರಕದಿರುವ ಸೇವಾ | ಶರಣರ ಸಂಜೀವಾ ||೨||

ಶ್ರೀದವಿಠಲನ ಸನ್ನಿಧಾನ ಪಾತ್ರ | ಸಂಸ್ತುತಿಸುವ ಮಾತ್ರ |

ಮೋದಪಡಿಸುತಿಹ ತಾ ನಿಹಪರದಲ್ಲಿ ಈತಗೆ ಸರಿಯೆಲ್ಲಿ |

ಮೇಧಿನಿಯೊಳಗಿನ್ನರಸಲು ನಾ ಕಾಣೆ | ಪುಸಿಯನ್ನಾಣೆ |

ಪಾದಸ್ಮರಣೆಯ ಮಾಡದವನೆ ಪಾಪಿ | ನಾ ಪೇಳುವೆ ಸ್ಥಾಪಿ ||೩||

ನಿಮ್ಮದೊಂದು ಉತ್ತರ

*

This site uses Akismet to reduce spam. Learn how your comment data is processed.