ಇಂದು ಎನಗೆ ಗೋವಿಂದ ನಿನ್ನ ಪಾದಾರ
ವಿಂದವ ತೋರೋ ಮುಕುಂದ
Anupallavi
ಸುಂದರ ವದನೆನೆ ನಂದಗೋಪನ ಕಂದ
ಮಂದರೋಹರ ಆನಂದ ಇಂದಿರಾ ರಮಣನೆ
ಚರಣಂ
ನೊಂದೇನಯ್ಯ ಭವ ಬಂದನದೊಳು ಸಿಲುಕಿ
ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು
ಕಂದನು ಎಂದೆನ್ನ ಕುಂದುಗಳೆಣಿಸದೆ
ತಂದೆ ಕಾಯೋ ಕೃಷ್ಣ ಕುಂದರ್ಪಜನಕನೆ
ಮೂಢತನದಿ ಬಹು ಹೇಡಿ ಜೀವ ನಾನಾಗಿ
ದ್ರುಢ ಭಕುತಿಯನು ಮಾಡಲಿಲ್ಲವೋ ಹರಿಯೇ
ನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆ
ಕಾಡಿಕಾರ ಕೃಷ್ಣ ಬೇಡಿಕೊಮ್ಬೆನೊ ನಿನ್ನ
ಧಾರುಣಿಯೊಳು ಭೋಭಾರಜೀವ ನಾನಾಗಿ
ದಾರಿತಪ್ಪಿ ನಡೆದೆ ಸೇರಿದೆ ಕುಜನರ
ಆರೂ ಕಾಯುವರಿಲ್ಲ ಸೇರಿದೆ ನಿನಗಯ್ಯಾ
ಧೀರವೇಣುಗೋಪಾಲ ಪಾರುಗಾಣಿಸೊ ಹರಿಯೇ
pallavi
indu enage gOvinda ninna paadara
vindava tOrO mukunda
anupallavi
sundara vadanene nandagOpana kanda
mandarOhara aananda indiraa ramaNa
caraNam 1
nondaneyya bhavabandanadoLu siluki
munde daari kaaNade kundide jagadoLu
kandanu endenna kundagaLeNisade
tande kaayo krshNa kandarpajanakane
caraNam 2
mUDhatanadi bahu hEDi jIva naanagi
dhrDhabhakutiyanu maaDalillavo hariye
nODalillavo ninna paaDalillavo mahime
kaaDikaara krshNa bEDikombeno ninna
caraNam 3
dhaaruNiyoLu bhoobhaarajIva naanaagi
daaritappi naDede sEride kujanara
aarU kaayuvarilla sEride ninagayyaa
dheeravENugOpaala paarugaaNiso hariye