ಶ್ರೀ ಹರಿ ಭಕ್ತಿ ಸಾರ

ಶ್ರೀಯರಸ ಗಾಂಗೇಯನುತ ಕೌಂ ತೇಯ ವಂದಿತಚರಣ ಕಮಲದ ಳಾಯತಾಂಬಕರೂಪ ಚಿನ್ಮಯ ದೇವಕೀತನಯ ||
ರಾಯ ರಘುಕುಲವರ್ಯ ಭೂಸುರ ಪ್ರಿಯಸುರಪುರನಿಲಯ ಚೆನ್ನಿಗ ರಾಯಚತುರೋಪಾಯ ರಕ್ಷಿಸು ನಮ್ಮನನವರತ || ೧ ||

ದೇವದೇವ ಜಗದ್ಭರಿತ ವಸು ದೇವಸುತ ಜಗದೇಕನಾಥ ರ ಮಾವಿನೋದಿತ ಸಜ್ಜನಾನತ ನಿಖಿಲ ಗುಣಭರಿತ ||
ಭಾವಜಾರಿಪ್ರಿಯ ನಿರಾಮಯ ರಾವಣಾಂತಕ ರಘುಕುಲಾನ್ಯ ದೇವ ಅಸುರವಿರೋಧಿ ರಕ್ಷಿಸು ನಮ್ಮನನವರತ || ೨ ||

ಅನುಪಮಿತ ಚಾರಿತ್ರ ಕರುಣಾ ವನದಿ ಭಕ್ತ ಕುಟುಂಬಿ ಯೋಗೀ ಆನಹೃದಯ ಪರಿಪೂರ್ಣ ನಿತ್ಯಾನಂದ ನಿಗಮನುತ ||
ವನಜನಾಭ ಮುಕುಂದ ಮುರಮ ರ್ದನ ಜನಾರ್ದನ ತೊ ಜಗತ್ಯಾ ವನ ಸುರಾರ್ಚಿತ ದೇವ ರಕ್ಷಿಸು ನಮ್ಮನನವರತ || ೩ ||

ಕಮಲಸಂಭವವಿನುತ ವಾಸವ ನಮಿತ ಮಂಗಳ ಚರಿತ ದುರಿತ ಕ್ಷಮಿತ ರಾಘವ ವಿಶ್ವಪೂಜಿತ ವಿಶ್ವ ವಿಖ್ಯಮಯ ||
ಅಮಿತವಿಕ್ರಮ ಭೀಮ ಸೀತಾ ರಮಣ ವಾಸುಕಿಶಯನ ಖಗವತಿ ಗಮನ ಕಂಜಜನಯ್ಯ ರಕ್ಷಿಸು ನಮ್ಮನನವರತ || ೪ ||

ಕ್ಷೀರವಾರಿಧಿಶಯನ ಶಾಂತಾ ಕಾರಾ ವಿವಿಧವಿಚಾರ ಗೋಪಿ ಜಾರ ನವನೀತಚೋರ ಚಕಾಧಾರ ಭವದೂರ ||
ಮಾರಪಿತ ಗುಣಹಾರ ಸರಸಾ ಕಾರ ರಿಪುಸಂಹಾರ ತುಂಬುರ ನಾರದಪ್ರಿಯ ವರದ ರಕ್ಷಿಸು ನಮ್ಮನನವರತ || ೫ ||

ತಾಮರಸದಳನಯನ ಭಾರ್ಗವ ರಾಮ ಹಲಧರರಾಮ ದಶರಥ ರಾಮ ಮೇಘಶ್ಯಾಮ ಸದ್ಗುಣಧಾಮ ನಿಸ್ಸಿಮ ||
ಸಾಮಗಾನಪ್ರೇಮ ಕಾಂಚನ ಧಾಮಧರ ಸುತ್ರಾಮವಿರಚಿತ ನಾಮ ರವಿಕುಲಸೋಮ ರಕ್ಷಿಸು ನಮ್ಮನನವರತ || ೬ ||

ವೇದಗೋಚರ ವೇಣುನಾದವಿ ನೋದ ಮಂದರಶೈಲಧರ ಮಧು ಸೂದನಾಚ್ಯುತ ಕಂಸದಾನವರಿಪು ಮಹಾಮಹಿಮ ||
ಯಾದವೇಂದ್ರ ಯಶೋದೆನಂದನ ನಾದಬಿಂದುಕಳಾತಿಶಯ ಪು ಹ್ಯಾದರಕ್ಷಕ ವರದ ರಕ್ಷಿಸು ನಮ್ಮನನವರತ || ೭ ||

ಅಕ್ಷಯಾಶ್ರಿತ ಸುಜನಜನ ಸಂ ರಕ್ಷಣ ಶ್ರೀವತ್ಸ ಕೌಸ್ತುಭ ಮೋಕ್ಷದಾಯಕ ಕುಟಿಲದಾನವಶಿಕ್ಷ ಕುಮುದಾಕ್ಷ ||
ಪಕ್ಷಿವಾಹನ ದೇವಸಂಕುಲ ಪಕ್ಷಜಗದಧ್ಯಕ್ಷವರನಿಟಿ ಲಾಕ್ಷ ಸಖ ಸರ್ವೇಶ ರಕ್ಷಿಸು ನಮ್ಮನನವರತ || ೮ ||

ಚಿತ್ರಕೂಟನಿವಾಸ ವಿಶ್ಯಾ ಮಿತ್ರ ಕ್ರತುಸಂರಕ್ಷಕ ರವಿ ಶಶಿ ನೇತ ಭವ್ಯಚರಿತ್ರ ಸದ್ಗುಣಗಾತ್ರ ಸತ್ಯಾತು ||
ಧಾತ್ರಿಜಾಂತಕ ಕಪಟನಾಟಕ ಸೂತು ಪರಮಪವಿತ್ರ ಫಲ್ಕುಣ ಮಿತ್ರ ವಾಕ್ಯವಿಚಿತ್ರ ರಕ್ಷಿಸು ನಮ್ಮನನವರತ || ೯ ||

ಮಂಗಳಾತ್ಮಕ ದುರಿತತಿಮಿರ ಪ ತಂಗ ಗರುಡತುರಂಗ ರಿಪುಮದ ಭಂಗ ಕೀರ್ತಿತರಂಗ ಪುರಹರಸಂಗ ನೀಲಾಂಗ ||
ಅಂಗದಪ್ರಿಯನಂಗಪಿತ ಕಾಳಿಂಗಮರ್ದನ ಅಮಿತಾ ಕರುಣಾ ಪಾಂಗ ಶ್ರೀನರಸಿಂಗ ರಕ್ಷಿಸು ನಮ್ಮನನವರತ || ೧೦ ||

ದಾಶರಥಿ ವೈಕುಂಠನಗರಿ ನಿ ವಾಸ ಜಗದೀಶ ಪಾಪ ವಿ ನಾಶ ಪರಮವಿಲಾಸ ಹರಿಸರ್ವೇಶ ದೇವೇಶ ||
ವಾಸುದೇವ ದಿನೇಶ ಶತಸಂ ಕಾಶ ಯದುಕುಲವಂಶತಿಲಕ ಪ ರಾಶರಾವತ ದೇವ ರಕ್ಷಿಸು ನಮ್ಮನನವರತ || ೧೧ ||

ಕುಂದಕುಮ್ಮಿಲರದನ ಪರಮಾ ನಂದ ಹರಿ ಗೋವಿಂದ ಸನಕ ಸ ನಂದ ವಂದಿತ ಸಿಂಧುಬಂಧನ ಮಂದರಾದ್ರಿಧರ ||
ಇಂದಿರಾಪತ ವಿಜಯಸಖ ಅರ ವಿಂದನಾಭ ಪುರಂದರಾರ್ಚಿತ ನಂದಕುಲ ಮುಕುಂದ ರಕ್ಷಿಸು ನಮ್ಮನನವರತ || ೧೨ ||

ಬಾಣಬಾಹುಚ್ಛೇದ ರಾವಣ ಪ್ರಾಣನಾಶನ ಪುಣ್ಯನಾಮ ಪು ರಾಣಪುರುಷೋತ್ತಮ ನಿಪುಣ ಅಣುರೇಣು ಪರಿಪೂರ್ಣ ||
ಕೊಣಿಪತ ಸುಲಲಿತ ಸುದರ್ಶನ ಪಾಣಿ ಪಾಂಡವರಾಜಕಾರ ಧು ರೀಣ ಜಗನಿರಾಣ ರಕ್ಷಿಸು ನಮ್ಮನನವರತ || ೧೩ ||

ನೀಲವರ್ಣ ವಿಶಾಲ ಶುಭಗುಣ ಶೀಲ ಮುನಿಕುಲಪಾಲ ಲಕ್ಷ್ಮಿ ಲೋಲ ರಿಪು ಶಿಶುಪಾಲ ಮಸ್ತಕಶೂಲ ವನಮಾಲ ||
ಮೂಲಕಾರಣ ವಮಲ ಯಾದವ ಜಾಲಹಿತ ಗೊಪಾಲ ಅಗಣಿತ ಲೀಲ ಕೋಮಲಕಾಯ ರಕ್ಷಿಸು ನಮ್ಮನನವರತ || ೧೪ ||

ನಾಗನಗರಿ ಧರಿತ್ರಿ ಕೋಶ ವಿ ಭಾಗ ತಂತ್ರ ನಿಯೋಗಗಮನ ರಾಗ ಪಾಂಡವರಾಜಜಿತ ಸಂಗ್ರಾಮ ನಿಸ್ಸಿಮ ||
ಯೋಗಗಮ್ಮ ಭವಾಬಿ ವಿಷಧರ ನಾಗ ಗಾರುಡಮಂತ್ರವಿದ ಭವ ರೋಗವೈದ್ಯ ವಿಚಿತ್ರ ರಕ್ಷಿಸು ನಮ್ಮನನವರತ || ೧೫ ||

ಶ್ರೀಮದುತೃಹ ದೇವನುತ ಶ್ರೀ ರಾಮ ನಿನ್ನಯ ಚರಣಸೇವಕ ಪ್ರೇಮದಿಂ ಸಾಷ್ಟಾಂಗವೆರಗಿಯೆ ಮಾಳ್ಮೆ ಬಿನ್ನಪವ ||
ಈ ಮಹಿಯೊಳೀವರಿಗೆ ನಾವು ಸು ಸ್ಟೀಮಿಗಳು ನಿನ್ನಯ ಪದಾಬ್ಬ ಕ್ಷೇಮವಾರ್ತೆಯನರುಹಿ ರಕ್ಷಿಸು ನಮ್ಮನನವರತ || ೧೬ ||

ಈಗಲೀ ಮರಾದೆಯಲಿ ಶರ ಣಾಗತರ ಸೇವೆಯೋಳು ಹೊಂಪುಳಿ ಯಾಗಿ ಬಾಳುವರೇನು ಧನ್ಯರೋ ಹರ ಮಹಾದೇವ ||
ಭೋಗಭಾಗ್ರವ ಬಯಸಿ ಮುಕ್ತಿಯ ನೀಗಿ ನಿಮ್ಮನು ಭಜಿಸಲರಿಯದ ಯೋಗಿಗಳ ಮಾತೇನು ರಕ್ಷಿಸು ನಮ್ಮನನವರತ || ೧೭ ||

ಭಕ್ತಿಸಾರದ ಚರಿತೆಯನು ಹರಿ ಭಕ್ತರಾಲಿಸುವಂತೆ ರಚಿಸುವೆ ಯುಕ್ತಿಯಲಿ ಬರೆದೋದಿದವರಿಷ್ಟಾರ್ಥ ಸಿದ್ಧಿಪುದು ||
ಮುಕ್ತಿಗಿದು ನೆಲೆದೊರಿವುದು ಹರಿ ಭಕ್ತರನು ಲಾಲಿಪುದು ನಿಜವತಿ ಭಕ್ತಿಗೊಲಿವಂದದಲಿ ರಕ್ಷಿಸು ನಮ್ಮನನವರತ || ೧೮ ||

ನಳಿನಲೋಚನ ನಿನ್ನ ಮೂರ್ತಿಯ ಕಳೆ ಬೆಳಗುತಿದೆ ಲಹರಿಯಲಿ ಭೂ ತಳದೋಚರಿಯಾದ ನಾಮಾಮೃತ ಸಮುದ್ರದಲಿ ||
ಬಳಸುವರು ಸತ್ಯವಿಗಳಿವರಗಳಿಕೆ ಎನಗಿನಿತಿಲ್ಲ ಸನ್ಮತಿ ಗಳಿಗೆ ಮಂಗಳವಿತ್ತು ರಕ್ಷಿಸು ನಮ್ಮನನವರತ || ೧೯ ||

ಗಿಳಿಯಮರಿಯನು ತಂದು ಪಂಜರ ದೊಳಗೆ ಪೊಷಿಸಿ ಕಲಿಸಿ ಮೃದು ನುಡಿಗಳನು ಲಾಲಿಸು ಕೇಳ್ವ ಪರಿಣತರಂತೆ ನೀನೆನಗೆ ||
ತಿಳುಹು ಮತಿಯನು ಎನ್ನ ಜಿಹ್ನೆಗೆ ಮೊಳಗುವಂದದಿ ನಿನ್ನ ನಾಮಾ ವಳಿಯ ಪೊಗಳಿಕೆಯಿತ್ತು ರಕ್ಷಿಸು ನಮ್ಮನನವರತ || ೨೦ ||

ಪೊಗಲಳೆವೇ ನಿನ್ನ ನಾಮದ ಸುಗುಣ ಸಚ್ಛಾರಿತ ಕಥನವ ನಗಣಿತೋಪಮ ಅಮಿತ ವಿಕ್ರಮಗಮ್ಮ ನೀನೆಂದು ||
ನಿಗಮತತಿ ಕೈವಾರಿಸುತ ಪದ ಯುಗವ ಕಾಣದೆ ಬಳಲುತಿದೆ ವಾ ಸುಕಿಶಯ ಸರ್ವೇಶ ರಕ್ಷಿಸು ನಮ್ಮನನವರತ || ೨೧ ||

ವೇದಶಾಸ್ತ್ರಪುರಾಣ ಪುಣ್ಯದ ಹಾದಿಯನು ನಾನರಿಯೆ ತರ್ಕದ ವಾದದಲಿ ಗುರುಹಿರಿಯರರಿಯದ ಮೂಢಮತಿ ಎನಗೆ ||
ಆದಿಮೂರುತಿ ನೀನು ನೆರೆ ಕರುಣೋ ದಯನು ಹೃದಯಾಂಗಣದಿ ಜ್ಞಾ ನೋದಯವೆನಗಿತ್ತು ರಕ್ಷಿಸು ನಮ್ಮನನವರತ || ೨೨ ||

ಹರಿವರಿತು ತಾಯ್ತನ್ನ ಶಿಶುವಿಗೆ ಒಸೆದು ಮೊಲೆ ಕೊಡುವಂತೆ ನೀ ಪೊ ಷಿಸದೇ ಬೇರಿನ್ನಾರು ಪೊಷಕರಾಗಿ ಸಲಹುವರು ||
ಬಸಿರೊಳಗೆ ಬ್ರಹ್ಮಾಂಡಕೋಟಿಯ ಪಸರಿಸಿದ ಪರಮಾತ್ಮನೀನೆಂ ದುಸುರುತಿವೆ ವೇದಗಳು ರಕ್ಷಿಸು ನಮ್ಮನನವರತ || ೨೩ ||

ಇಬ್ಬರಣುಗರು ನಿನಗೆ ಅವರೊಳ ಗೊಬ್ಬಮಗನೀರೇಳು ಲೋಕದ ಹೆಬೇಳೆಸು ಬೆಳೆವಂತೆ ಕಾರಣಕರ್ತನಾದವನು ||
ಒಬ್ಬ ಮಗನದ ಬರದ ಕರಣಿಕ ರಿಬ್ರರೀ ಲೋಕಪ್ರಸಿದ್ದರು ಹಬ್ಬಿಸಿದೆ ಪ್ರಾಣಿಗಳ ರಕ್ಷಿಸು ನಮ್ಮನನವರತ || ೨೪ ||

ಸಿರಿಯು ಕುಲಸತಿ ಸುತನು ಕಮಲಜ ಹಿರಿಯ ಸೊಸೆ ಶಾರದೆ ಸಹೋದರಿ ಗಿರಿಜೆ ಮೈದುನ ಶಂಕರನು ಸುರರೆಲ್ಲ ಕಿಂಕರರು ||
ನಿರುತ ಮಾಯೆಯು ದಾಸಿ ನಿಜಮಂ ದಿರವಜಾಂಡವು ಜಂಗಮಸ್ಕಾ ವರುಕುಟುಂಬಿಗ ನೀನು ರಕ್ಷಿಸು ನಮ್ಮನನವರತ || ೨೫ ||

ಸಾಗರನ ಮಗಳರಿಯದಂತೆ ಸ ರಾಗದಲಿ ಸಂಚರಿಸುತಿಹ ಉ ದೋಗವೇನು ನಿಮಿತ್ತ ಕಾರಣವಿಲ್ಲಲೋಕದಲಿ ||
ಭಾಗವತರಾದವರ ಸಲಹುವ ನಾಗಿ ಸಂಚರಿಸುವುದು ಈ ಭವ ಸಾಗರದಿ ಮುಳುಗಿಸದೆ ರಕ್ಷಿಸು ನಮ್ಮನನವರತ || ೨೬ ||

ಹಸ್ತಿವಾಹನನಾದಿಯಾದ ಸ ಮಸ್ತ ದೇವನಿಕಾಯಾದೊಳಕೆ ಪು ಶನಾವನು ನಿನ್ನ ವೊಲ್ ಶರಣಾಗತರ ಪೊರೆದೆ ||
ಹಸ್ತ ಕಲಿತ ಸುದರ್ಶನದೊಳರಿ ಮಸ್ತಕವನಿಳುಹುವ ಪರಾಪರ ವಸ್ತುವಲ್ಲವೆ ನೀನು ರಕ್ಷಿಸು ನಮ್ಮನನವರತ || ೨೭ ||

ಹಗೆಯರಿಗೆ ವರವೀವರಿಬ್ಬರು ತೆಗೆಯಲರಿಯರು ಕೊಟ್ಟ ವರಗಳ ತೆಗೆದು ಕೊಡುವ ಸಮರ್ಥರಾರೀ ಜಗಕೆ ನಿನ್ನಂತೆ ||
ಸುಗುಣರಿನ್ನಾರುಂಟು ಕದನವ ಬರೆದು ನಿನ್ನೊಳು ಜೈಸುವವರೀ ಜಗದೊಳುಂಟೇ ದೇವ ರಕ್ಷಿಸು ನಮ್ಮನನವರತ || ೨೮ ||

ಸುಮನರಸ ವೈರದಲಿ ಕೆಲಬರ ಕುಮತಿಗಳು ತಪದಿಂದ ಭರ್ಗನ ಕಮಲಜನ ಪದಯುಗವ ಮೆಚ್ಚಿರಿ ವರವ ಪಡೆದಿಹರು ||
ಸಮರಮುಖದೊಳಗುಪಮೆಯಲಿ ವಿ ಕುಮದಿ ವೈರವ ಮಾಡಿದವರಿಗೆ ಅಮರಪದವಿಯನಿತ್ತೆ ರಕ್ಷಿಸು ನಮ್ಮನನವರತ || ೨೯ ||

ಬಲಿಯ ಬಂಧಿಸಿ ಮೊರೆಯಿಡುವ ಸತಿ ಗೊಲಿದು ಅಕ್ಷಯವಿತ್ತು ಕರುಣದಿ ಮೊಲೆಯುಣಿಸಿದ ಬಾಲಕಿಯ ಪಿಡಿಸುವನಪಹರಿಸಿ ||
ಶಿಲೆಯ ಸತಿಯಳ ಮಾಡಿ ತ್ರಿಪುರದ ಲಲನೆಯರ ವತಗೆಡಿಸಿ ಕೂಡಿದ ಕೆಲಸವುತ್ತಮವಾಯ್ತು ರಕ್ಷಿಸು ನಮ್ಮನನವರತ || ೩೦ ||

ಕರಿಯ ಕಾಯಾ ಜಲದಿ ಮಕರಿಯ ತರಿದು ಹಿರಣ್ಯಾಕ್ಷಕನ ಸೀಳ್ಯಾ ತರಳನನು ತಲೆಗಾಯು ಶಕಟಾಸುರ ಹತಮಾಡಿ ||
ದುರುಳಕಂಸನ ಕೊಂದು ಮಗಧನ ಮುರಿದು ವತೃನ ಸಂಹರಿಸಿ ಖರ ಹರಣವನು ಹಿಂಗಿಸಿದೆ ರಕ್ಷಿಸು ನಮ್ಮನನವರತ || ೩೧ ||

ಶಿಶುತನದ ಸಾಮರ್ಥ್ಯದಲಿ ಕೆಲಸುರರನು ಸಂಹರಿಸಿ ಚಕ್ರವ ಬಿಸುಟು ಯೌವನಕಾಲದಲಿಯಾ ಪಾಂಡು ಸುತರಿಂದ ||
ವಸುಮತಿಯ ಭಾರವನಿಳುಹಿ ಸಾ ಹಸದಿ ಮೆರೆದವನಾಗೆ ನೀ ಮೆಸಿದೆ ತ್ರಿಜಗವನ್ನೆಲ್ಲ ರಕ್ಷಿಸು ನಮ್ಮನನವರತ || ೩೨ ||

ಎಲ್ಲರಲಿ ನೀನಾಗಿ ಸುಮನಸ ರಲ್ಲಿ ಅತಿಹಿತಿನಾಗಿ ಯಾದವ ರಲ್ಲಿ ಬಾಂಧವನಾಗಿ ದಾನವರಲ್ಲಿ ಹಗೆಯಾಗಿ |
ಕೊಲ್ಲಿಸಿದೆ ಭೀಮಾರ್ಜುನರ ಕೈ ಯಲಿ ಕೌರವ ಕುಲವನೆಲ್ಲವ ಬಲ್ಲಿದನು ನೀನಹುದು ರಕ್ಷಿಸು ನಮ್ಮನನವರತ || ೩೩ ||

ನರಗೆ ಸಾರಥಿಯಾಗಿ ರಣದೊಳು ತುರಗ ನೀರಡಿಸಿದರೆ ವಾರಿಯ ಸರಸಿಯನು ನಿರ್ಮಿಸಿ ಕಿರೀಟಿಯ ಕೈಲಿ ಸೈಂಧವನ ||
ಶಿರವನು ಕೆಡುಹಿಸಿ ಅವನ ತಂದೆಯ ಕರತಲಕೆ ನೀಡಿಸಿದೆ ಹರಹರ ಪರಮಸಾಹಸಿ ನೀನು ರಕ್ಷಿಸು ನಮ್ಮನನವರತ || ೩೪ ||

ಬವರದಲಿ ಖತಿಗೊಂಡು ಗದೆಯೊಳು ಕವಿದು ನಿನ್ನಶ್ರುತಾಯಧನು ಹೊ ಕವಘಡಿಸಿ ಹೊಯಾಡಿ ತನ್ನಾಯುಧದಿ ತಾ ಮಡಿದ |
ವಿವರವೇನೋ ತಿಳಿಯೆ ಈ ಮಾ ಯವನು ನೀನೇ ಬಲ್ಲೆ ನಿನ್ನಾ ಯುವನು ಬಲ್ಲವರುಂಟೆ ರಕ್ಷಿಸು ನಮ್ಮನನವರತ || ೩೫ ||

ಇಳೆಗೆ ಪತಿಯಾದವನು ಯಾದವ ರೊಳಗೆ ಬಾಂಧವ ನಿನಗೆ ಸೋದರ ದಳಿಯನಾದಭಿಮನ್ಯುವನು ಕೊಲ್ಲಿಸಿದೆ ಕೊಳಗುಳದಿ ||
ಅಳಲಿನಬುಧಿಯಳದಿ ತಂಗಿಯ ಬಳಲಿಸಿದೆ ಕುಲಗೋತ ಬಾಂಧವ ರೊಳಗೆ ಕೀರ್ತಿಯ ಪಡೆದ ರಕ್ಷಿಸು ನಮ್ಮನನವರತ || ೩೬ ||

ತಾಯನಗಲಿದ ತನಯನೀ ರಾ ಧೇಯನೊಳು ರಹಸ್ಯದಲಿ ಕುಲ ತಾಯವನು ನೆರೆ ತಿಳುಹಿ ಅರ್ಜುನನಿಂದ ಕೊಲ್ಲಿಸಿದೆ ||
ಮಾಯಾಮಂತ್ರದ ಕುಟಿಲಗುಣದ ನ್ಯಾಯವೊ ಇದನ್ಯಾಯವೊ ನೀ ನ್ಯಾಯವನು ನೀ ಬಲೆ ರಕ್ಷಿಸು ನಮ್ಮನನವರತ || ೩೭ ||

ಕೊಲ್ಕು ಬಗೆದವನಾಗಿ ನೀ ಹಗೆ ಯಲ್ಲಿ ಸಖ್ಯವ ಬೆಳೆಸದು ಹಿತ ವಲ್ಲ ನಿನ್ನಯ ಗುಣವ ಬಲ್ಲವರಿಗೆ ಯದುಕುಲದಿ ||
ಗೊಲ್ಲನಾರಿಯರೊಳು ಪ್ರವರ್ತಕ ನಲ್ಲವೇ ಭಾವಿಸಲು ಲೋಕದೊ ಳೆಲ್ಲರೂ ಸರಿ ನಿನಗೆ ರಕ್ಷಿಸು ನಮ್ಮನನವರತ || ೩೮ ||

ಮಗನ ಕೊಂದವನಾಳುವಂತಾ ಸುಗುಣೆಯರು ಹದಿನಾರು ಸಾವಿರ ಸೊಗಸುಗಾತಿಯವರ ಮೋಹದ ಬಲೆಗೆ ವಿಟನಾಗಿ ||
ಬಗೆಬಗೆಯ ರತಿಕಲೆಗಳಲಿ ಕೂ ರುಗರ ನಾಟಿಸಿ ಮೆರೆದು ನೀನಿ ಜಗಕೆ ಪಾವನನಾದೆ ರಕ್ಷಿಸು ನಮ್ಮನನವರತ || ೩೯ ||

ಏನು ಮಾಡಿದರೇನು ಕರ್ಮವ ನೀನೊಲಿಯದಿನ್ನಿ ದಿಲ್ಲದಕನು ಮಾನವುಂಟೇ ಭ್ರಮರಕೀಟನ್ಯಾಯದಂದಲಿ |
ನೀನೊಲಿಯೆ ತೃಣ ಪರ್ವತವು ಪುಸಿ ಯೇನು ನೀ ಪತಿಕರಿಸೆ ಬಳಿಕಿ ನ್ನೇನು ಚಿಂತಿಸಲೇಕೆ ರಕ್ಷಿಸು ನಮ್ಮನನವರತ || ೪೦ ||

ಎಷ್ಟು ಮಾಡಲು ಮುನ್ನತಾ ಪಡ ದಷ್ಟು ಎಂಬುದು ಲೋಕದೊಳುಮತಿ ಗೆಟ್ಟ ಮಾನವರಾಡುತಿಹರಾಮಾತದಂತಿರಲಿ ||
ಪದ್ಮವಾರಿಂದಾಯು ದ್ರುವನಿಗೆ ಕೊಟ್ಟ ವರ ತಪ್ಪಿತೇ ಕುಚೇಲನೀ ಗಿಷ್ಟ ಬಾಂಧವ ನೀನು ರಕ್ಷಿಸು ನಮ್ಮನನವರತ || ೪೧ ||

ತನ್ನ ದೇಹಾತುರದೊಳಡವಿಯೊ ಳನರನು ಸಂಹರಿಸುತಿರುತಿರೆ ನಿನ್ನ ನಾಮದೊಳಧಿಕವೆರಡಕ್ಷರವ ಬಿಸುತ ||
ಧನ್ಯನಾದನೆ ಮುನಿಕುಲದಿ ಸಂ ಪನ್ನನಾದನು ನೀನೊಲಿದ ಬಳಿ ಕಿನ್ನು ಪಾತಕವುಂಡೆ ರಕ್ಷಿಸು ನಮ್ಮನನವರತ || ೧೨ ||

ನಿನ್ನ ಸತಿಗಳುಕಿದ ದುರಾತ್ಮನ ಬೆನ್ನಿನಲಿ ಬಂದವನ ಕರುಣದಿ ಮನ್ನಿಸಿದ ಕಾರನ ದಯಾಪರಾಮೂರ್ತಿ ಎಂದೆನುತ ||
ನಿನ್ನ ಭಜಿಸಿದ ಸಾರ್ವಭೌಮರಿ ಗಿನ್ನು ಇಹಪರವುಂಟು ಸದ್ಗುಣ ರನ್ನ ಸಿರಿಸಂಪನ್ನ ರಕ್ಷಿಸು ನಮ್ಮನನವರತ || ೪೩ ||

ವೀರರಾವಣನೊಡನೆ ಹೋರಿದ ವೀರರಗ್ಯದ ಕಪಿಗಳವರೊಳು ಮಾರುತ ನವನಿಗೇನು ಧನ್ಯನೋ ಬ್ರಹ್ಮಪಟ್ಟದಲಿ ||
ಸೇರಿಸಿದ ನಿನ್ನಂತೆ ಕೊಡುವ ಉ ದಾರಿಯಾವನು ತ್ರಿಜಗದೊಳಗಾ ಕಾರಣದಿ ನಂಬಿದೆನು ರಕ್ಷಿಸು ನಮ್ಮನನವರತ || ೪೪ ||

ಶಿವಶಿವಾ ನೀ ಮಾಡಿದುಪಕಾರವನು ಮರೆತವರುಂಟೆ ಪಾಪದಿ ನವೆದಳಾಮೀಳಗೊಲಿದ ಪ್ರಾಣವಿಯೋಗಕಾಲದಲಿ ||
ಆವನವರ ಕೈಗೊಪ್ಪಿಸದೆ ಕಾಯವನು ಮಿಕ್ಕಾ ದವರಿಗುಂಟೇ ಕರುಣ ರಕ್ಷಿಸು ನಮ್ಮನನವರತ || ೪೫ ||

ಹೆತ್ತಮಗಳು ಮದುವೆಯಾದವ ನುತ್ತಮನು ಗುರುಪತ್ನಿಗಳುಪಿದ ಚಿತ್ತಜನು ಮಾವನ ಕೃತಘ್ನನು ನಿನಗೆ ಮೈದುನನು ||
ಹೊತ್ತು ತಪ್ಪಿಸಿ ಕಾಮದಲಿ ಮುನಿ ಪೊತ್ತಮನ ಮಡದಿಯನು ನೆರೆದವ ಗಿತ್ತೆ ಕೈವಲ್ಯವನ್ನು ರಕ್ಷಿಸು ನಮ್ಮನನವರತ || ೪೬ ||

ಇಲಿಹನು ಅಲ್ಲಿಲ್ಲವೆಂಬೀ ಸೊಲ್ಕು ಸಲ್ಲದು ಹೊರಗೊಳಗೆ ನೀ ಇಲ್ಲದಿಲ್ಲವೆಂಬುದನೆಲ್ಲ ಕೆಲಕೆಲರು ||
ಬಲ್ಲರಿಳೆಯೊಳು ಭಾಗವತರಾ ದೆಲ್ಲರಿಗೆ ವಂದಿಸಿದ ಕುಜನರಿ ಗಿಲ್ಲ ಸದ್ವತಿ ನೋಡಿ ರಕ್ಷಿಸು ನಮ್ಮನನವರತ || ೪೭ ||

ಸಿರಿ ಸಂಪತ್ತಿನಲಿ ನೀ ಮೈ ಮರೆದು ಮದಗರ್ವದಲಿ ದೀನರ ಕರುಣದಿಂದೀಕ್ಷಿಸದೆ ಕಡೆಗಣಿಂದ ನೋಡುವರೇ ||
ಹರಹರ ಅನಾಥರನು ಪಾಲಿಸಿ ಕೊಡುವ ಉದಾರಯೆಂಬೀ ಬಿರುದ ಬಿಡುವರೆ ತಂದೆ ರಕ್ಷಿಸು ನಮ್ಮನನವರತ || ೪೮ ||

ದೀನ ನಾನು ಸಮಸ್ತ ಲೋಕಕೆ ದಾನಿ ನೀನು ವಿಚಾರಿಸಲು ಮತಿ ಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು ||
ಏನು ಬಲ್ಲೆನು ನಾನು ನೆರೆ ಸುಜ್ಞಾನಮೂರುತಿ ನೀನು ನಿನ್ನ ಸ ಮಾನರುಂಟೇ ದೇವ ರಕ್ಷಿಸು ನಮ್ಮನನವರತ || ೪೯ ||

ತರಳತನದಲ ಕೆಲವು ದಿನ ದುರು ಭರದ ಗರ್ವದಿ ಕೆಲವು ದಿನ ಮೈ ಮರೆದು ನಿಮ್ಮಡಿಗೆರಗದಾದೆನು ವಿಷಯಕೇಳಿಯಲಿ ||
ನರಕಭಾಜನನಾಗಿ ಕಾಮಾ ತುರದಿ ಪರಧನ ಪರಸತಿಗೆ ಮನ ಹರಿದ ಪಾಪವ ಕಳೆದು ರಕ್ಷಿಸು ನಮ್ಮನನವರತ || ೫೦ ||

ಮರೆದನಭ್ಯುದಯಲಿ ನಿಮ್ಮನು ಮರೆಯನಾಪತ್ತಿನಲಿ ಹರಿಯೆಂ ದೊರೆಯುವೆನು ಮನವೇಕಭಾವದೊಳಿಲ್ಲ ನಿಮ್ಮಡಿಯ ||
ಮರೆದು ಬಾಹಿರನಾದವ ನೀ ಮರೆವರೇ ಹಸು ತನ್ನ ಕಂದನ ಮರೆವುದೇ ಮಮತೆಯಲಿ ರಕ್ಷಿಸು ನಮ್ಮನನವರತ || ೫೦ ||

ದಾರುಣಿಗೆ ವರಚಕ್ರವರ್ತಿಗಳಾರುಮಂದಿ ನೃಪಾಲಕರು ಹದಿ ನಾರಮಂದಿಯು ಧರಣಿಯನು ಮುನ್ನಾಳ್ಪ ರೆನಿತೊ ||
ವೀರರನು ಮೆಚ್ಚಿದಳೆ ಧರಣೀ ನಾರಿ ಬಹು ಮೋದದೊಳು ನಿನ್ನನು ಸೇರಿ ಓಲೈಸುವಳು ರಕ್ಷಿಸು ನಮ್ಮನನವರತ || ೫೨ ||

ಭಾರಕರ್ತನು ನೀನು ಬಹು ಸಂ ಸಾರಿಯಂಬುದು ನಿಗಮತತಿ ಕೈ ವಾರಿಸುತಿದೆ ದಿವಿಜ ಮನುಜ ಭುಜಂಗರೊಳಗಿನ್ನು ||
ಆರಿಗುಂಟು ಸ್ವತಂತ್ರ ನಿನ್ನಂ ತಾರು ಮುಕ್ತಿಯನೀವ ಸದ್ಗುರು ವಾರು ಜಗದಧ್ಯಕ್ಷ ರಕ್ಷಿಸು ನಮ್ಮನನವರತ || ೫೩ ||

ಗತಿವಿಹೀನರಿಗಾರು ನೀನೇ ಗತಿಕಣಾ ಪತಿಕರಿಸಿ ಕೊಡುಸ ದೃತಿಯ ನೀನೆಲೆ ದೇವ ನಿನಗಪರಾಧಿ ನಾನಲ್ಲ ||
ಶ್ರುತಿವಚನವಾಡುವುದು ಶರಣಾಗತರ ಸೇವಕನೆಂದು ನಿನ್ನನು ಮತಿವಿಡಿದು ನಂಬಿದೆನು ರಕ್ಷಿಸು ನಮ್ಮನನವರತ || ೫೪ ||

ಈಗಲೂ ಈ ದೇಹವಿನ್ಮಾ ವಾಗಲೋ ನಿಜವಿಲ್ಲವೆಂಬುದ ನೀಗ ತಿಳಿಯದೆ ಮಡದಿ ಮನೆ ಮನೆವಾರ್ತೆ ಎಂದೆಂಬ ||
ರಾಗಲೋಭದಿ ಮುಳುಗಿ ಮುಂದಣ ತಾಗು ಬಾಗುಗಳರಿಯೆ ನಿನ್ನ ಸ ಮಾಗಮವ ಬಯಸುವೆನು ರಕ್ಷಿಸು ನಮ್ಮನನವರತ || ೫೫ ||

ಮಾಂಸ ರಕ್ತದ ಮಡುವಿನಲ್ಲಿ ನವಮಾಸ ಜನನಿಯ ಜಠರದೊಳಗಿರು ವಾ ಸಮಯದಲಿ ವೃತ್ತಿಯನ್ನು ಕಲಿಸಿದ ಪ್ರಭುವಾರು ||
ನೀ ಸಲಹಿದವನಲ್ಲವೇ ಕರುಣಾ ಸಮುದ್ರನು ನೀನಿರಲು ಕಮ ಲಾಸನನ ಹಂಗೇಕೆ ರಕ್ಷಿಸು ನಮ್ಮನನವರತ || ೫೬ ||

ಬಲು ಮೃಗ ಮರವು ಪಕ್ಷಿ ಕೀಟಕ ಜಲಷರೌಘದಿ ಜನಿಸಿದೆನು ಕೊ ಐಲೆಗೊಳಿಸಬೇಡಕಟ ಮಾನವನಾದ ಬಳಿಕಿನ್ನು ||
ಕೊಲಿಸದಿರು ಯಮನಿಂದ ಮುರಚದ ಒಲಿದು ನಿನ್ನನು ಭಜಿಸುವವರಿಗೆ ಕೊಲೆಗೆ ಕಾರಣವೇನು ರಕ್ಷಿಸು ನಮ್ಮನನವರತ || ೫೭ ||

ಪಂಚಭೂತದ ಕಾಯದೊಳು ನೀ ವಂಚಿಸದೆ ಇರುತಿರಲು ಪೂರ್ವದ ಸಂಚಿತದ ಫಲವೆನ್ನಲೇಕಿದು ಮರುಳುತನದಿಂದ ||
ಮಿಂಚಿದವರಿನ್ನುಂಟೆ ತಿಳಿಯೆ ಪ ಪಂಚವೆಲ್ಲಕೆ ತಪ್ಪಿದವನೀ ಕೊಂಚಗಾರನೆ ಕೃಷ್ಟ ರಕ್ಷಿಸು ನಮ್ಮನನವರತ || ೫೮ ||

ಹಲವು ಕರ್ಮಗಳಿಂದ ಮೂತ್ರದ ಬಲಗಳಲಿ ಸಂಚರಿಸಿ ಪದವಿಯ ಫಲ ಕಾಣದೆ ಹೊಲವು ತಪ್ಪಿದೆನೆನ್ನ ದೇಹದಲಿ ||
ಒಲಿದು ನೀನಿರೆ ನಿನ್ನ ಸಲುಗೆಯ ಒಲುಮೆಯಲಿ ಬರಸೆಳೆವ ಮುಕುತಿಯ ಲಲನೆಯನೆ ತಳುವಿಲ್ಲ ರಕ್ಷಿಸು ನಮ್ಮನನವರತ || ೫೯ ||

ಎತ್ತಿದೆನು ನಾನಾ ಶರೀರವ ಹೊತ್ತಲಿಸಿದೆನು ಸಲೆ ಬೇ. ಸತ್ತು ನಿನ್ನಯ ಪದವ ಕಾಣದೆ ತೊಳಲಿಬಳಲಿದೆನು ||
ಸತ್ತು ಹುಟ್ಟುವ ಹು ಹಿಂಗುವ ಸತ್ತ ತೊಡಕನು ಮಾಣಿಸಲೆ ಪುರು ಷೋತ್ತಮನೆ ಮನವೊಲಿದು ರಕ್ಷಿಸು ನಮ್ಮನನವರತ || ೬೦ ||

ಇಂದು ಈ ಜನ್ಮದಲಿ ನೀನೇ ಬಂಧು ಹಿಂದಣ ಜನ್ಮದಲಿ ಬಳಿ ಸಂದು ಮುಂದಣ ಜನ್ಮಕಧಿಪತಿಯಾಗಿ ಇರುತಿರಲು ||
ಎಂದಿಗೂ ತನಗಿಲ್ಲ ತನಸಂ ಬಂಧ ನಿನ್ನದು ಎನಗೆ ನೀ ಗತಿ ಯೆಂದು ಬಿನ್ನಿಸಿದೆನು ರಕ್ಷಿಸು ನಮ್ಮನನವರತ || ೬೦ ||

ಗಣನೆಯಿಲ್ಲದ ಜನನಿಯರ ಮೊಲೆ ಯುಣಿಸಲಾಪಯಬಿಂದುಗಳನದ ನೆಣಿಸಲಳವೇ ಸಪ್ತಸಾಗರಕಧಿಕವೆನಿಸುವುದು |
ಬಣಗು ಕಮಲಜನದಕೆ ತಾನೇ ಮಣೆಯಗಾರನು ಈತ ಮಾಡಿದ ಕುಣಿಕೆಗಳ ನೀ ಬಿಡಿಸಿ ರಕ್ಷಿಸು ನಮ್ಮನನವರತ || ೬೨ ||

ಲೇಸಕಾಣೆನು ಜನನ ಮರಣದಿ ಘಾಸಿಯಾದೆನು ನೊಂದೆನಕಟಾ ಲೇಸೆನಿಸಿ ನೋಡಲು ಪರಾಪರವಸ್ತು ನೀನಾಗಿ ||
ನೀ ಸಲಹುವವನಲ್ಲವೇ ಕರುಣಾ ಸಮುದ್ರನು ನೀನಿರಲು ಕಮ ಲಾಸನನ ಹಂಗೇನು ರಕ್ಷಿಸು ನಮ್ಮನನವರತ || ೬೩ ||

ಕಾಪುರುಷರೆದಾರುಮಂದಿ ಸಮೀಪದಲಿ ಕಾಡುವರು ಎನ್ನೆನು ನೀ ಪರಾಮರಿಸದೆ ಪರಾಕಾಗಿಹುದು ಲೇಸಲ್ಲ ||
ಶ್ರೀಪದಾಬ್ಬದ ಸೇವೆಯಲಿ ನೆರೆ ಪಾಪವನು ಪರಿಹರಿಸೇ ನೀ ನಿಜ ರೂಪಿನಲಿ ಬಂದೊಳಿದು ರಕ್ಷಿಸು ನಮ್ಮನನವರತ || ೬೪ ||

ಐದು ತತ್ತ್ವಗಳಾದವೊಂದಕ್ಕೆದು ಕಡೆಯಲಿ ತತ್ಯವಿಪ್ಪ ತೈದು ಕೂಡಿದ ತನುಳೆನಲಿ ವಂಚಿಸದೆ ನೀನಿರಲು ||
ಭೇದಿಸದೆ ಜೀವಾತ್ಮ ತಾ ಸಂ ಪಾದಿಸಿದ ಸಂಚಿತ ಸುಕರ್ಮವ ನಾದರಸಿ ಕೈಕೊಂಡು ರಕ್ಷಿಸು ನಮ್ಮನನವರತ || ೬೫ ||

ಎಂಟುಗೇಣಿನ ದೇಹ ರೋಮಗಳೆಂಟುಕೊಟಿಯು ಕೀಲಳರವ ತೆಂಟು ಮಾಂಸಗಳಿಂದ ಮಾಡಿದ ಮನವೊಲಿದು ||
ನೆಂಟ ನೀನಿರ್ದಗಲಿದಡೆ ಒಣ ಹೆಂಟೆಯಲಿ ಮುಚ್ಚುವರು ದೇಹದ ಲುಂಟೆ ಫಲ ಪುರುಷಾರ್ಥ ರಕ್ಷಿಸು ನಮ್ಮನನವರತ || ೬೬ ||

ಸ್ನಾನಸಂಧಾಧ್ಯಾನಜಪತಪ ದಾನ ಧರ್ಮ ಪರೋಪಕಾರ ನ ಹೀನಕರ್ಮದೊಳುಲಿವನಲ್ಲದೆ ಬೇರೆ ಗತಿಯುಂಟೆ ||
ಏನು ಮಾಡಿದರೇನು ಮುಕ್ಕಿಜ್ಞಾನವಿಲ್ಲದಡಿಲ್ಲ ಭಕ್ತಿಗೆ ನೀನೆ ಕಾರಣನಾಗಿ ರಕ್ಷಿಸು ನಮ್ಮನನವರತ || ೬೭ ||

ಕೊಪವೆಂಬುದು ತನುವಿರಲಿ ನೆರೆ ಪಾಪ ಪಾತಕದಿಂದ ನರಕದ ಕೂಪದಲಿ ಮುಳುಗುವುದು ತಪ್ಪದು ಶಾಸ್ತ್ರಸಿದ್ದವಲೇ ||
ರಾಪುಮಾಡದೆ ಬಿಡನು ಯಮನು ನಿರಪರಾಧಿಯ ನೋಡಿ ಕೀರ್ತಿಕ ಲಾಪವನು ನೀ ಕಾಯು ರಕ್ಷಿಸು ನಮ್ಮನನವರತ || ೬೮ ||

ನಿನ್ನ ಸೂತ್ರದೊಳಾಡುವವು ಚೈತನ್ಯ ಸಚರಾಚರಗಳೆಲ್ಲವು ನಿನ್ನ ಸೂತ್ರವು ತಪ್ಪಿದರೆ ಮೊಗ್ರುಪವು ಹೂಹೆಗಳು ||
ಇನ್ನು ನಮಗೆ ಸ್ವತಂತ್ರವೆಲ್ಲಿಯ ದನ ಕರ್ಮಸುಕರ್ಮವೆಲ್ಲವು ನಿನ್ನದೆಂದೊಪ್ಪಿಸಿದೆ ರಕ್ಷಿಸು ನಮ್ಮನನವರತ || ೬೯ ||

ಒಡೆಯ ನೀನೆಂದರಿತು ನಾ ನೀ ನಿಮ್ಮಡಿಯ ಭಜಿಸದೆ ದುರುಳನಾದೆನು ಮಡದಿ ಮಕ್ಕಳ ಮೋಹದಲಿ ಮನ ಸಿಲುಕಿತಡಿಗಡಿಗೆ ||
ಮಡದಿಯಾರೀ ಮಕ್ಕಳಾರೀ ಒಡಲಿಗೊಡೆಯನು ನೀನು ನೀ ಕೈ ಪಿಡಿದು ಮುದದಲಿ ಬಿಡದೆ ರಕ್ಷಿಸು ನಮ್ಮನನವರತ || ೭೦ ||

ವಂಟಿಸಿದ ಮುದಮುಖರು ಕೆಲಗಲ ರುಂಟು ರಿಪುಗಳು ದಂಟಿಸುತ ಬಲು ಕಂಟಕದಿ ಕಾಡುವರು ಕಾಯ್ಕೆ ಕಲುಷಸಂಹಾರ ||
ಬಂಟನಲ್ಲವೆ ನಾನು ದೀನರ ನೆಂಟನಲ್ಲವೆ ನೀನು ನಿನ್ನೊಳ ಗುಂಟೆ ನಿರ್ದಯ ನೋಡಿ ರಕ್ಷಿಸು ನಮ್ಮನನವರತ || ೭೧ ||

ದಂಡಧರನುಪಟಲದಿ ಮಿಗೆ ಮುಂ ಕೊಂಡು ಮೊರೆಯಾಗುವವರ ಕಾಣೆನು ಪುಂಡರೀಕೋದ್ಭವನ ಶಿರವನ್ನು ಕಡಿದು ತುಂಡರಿಸಿದ ||
ಖಂಡಪರಶವು ರುದ್ರಭೂಮಿಯೊ ಳಂಡಲೆದು ತಿರುಗುವನು ನೀನು ದಂಡ ದೇವರದೇವ ರಕ್ಷಿಸು ನಮ್ಮನನವರತ || ೭೨ ||

ಶಕ್ತಿಯೆಂಬುದು ಮಾಯೆ ಮಾಯಾ ಶಕ್ತಿಯದು ತನುವಿನಲಿ ನೀ ನಿಜ ಮುಕ್ತಿದಾಯಕನಿರಲು ಸುಖದುಃಖಾದಿಗಳಿಗಾರು ||
ಯುಕ್ತಿಯೊಳಗಿದನರಿತು ಮನದಿ ವಿ ರಕ್ತಿಯಲಿ ಭಜಿಸುವಗೆ ಮುಕ್ತಿಗೆ ಭಕ್ತಿಯೇ ಕಾರಣವು ರಕ್ಷಿಸು ನಮ್ಮನನವರತ || ೭೩ ||

ಮೂರುಗುಣ ಮೊಳೆದೋರಿತದರೊಳು ಮೂರು ಮೂರ್ತಿಗಳಾಗಿ ರಂಜಿಸಿ ತೋರಿ ಸೃಷ್ಟಿಸಿತಿಲಯಂಗಳ ರಚಿಸಿ ವಿಲಯದಲಿ ||
ಮೂರು ರೂಪೊಂದಾಗಿ ಪ್ರಳಯದ ವಾರಿಯಲಿ ವಟಪತ್ರಶಯನದಿ ಸೇರಿದವ ನೀನೀಗ ರಕ್ಷಿಸು ನಮ್ಮನನವರತ || ೭೪ ||

ನೀರಮೇಲಣ ಗುಳ್ಳೆಯಂದದಿ ತೊರಿಯಡಗುವ ದೇಹದೀ ಸಂ ಸಾರ ಬಹಳಾರ್ಣವದೊಳಗೆ ಮುಳುಗಿದೆನು ಪತಿಕರಿಸಿ ||
ತೋರಿಸಚಲಾನಂದಪದವಿಯ ಸೇರಿಸಕಟಾ ನಿನ್ನ ವೊಲ್ಯಮ ಗಿನ್ನಾರು ಬಾಂಧವರುಂಟು ರಕ್ಷಿಸು ನಮ್ಮನನವರತ || ೭೫ ||

ಹೊದ್ದಿ ನಿಲುವುದೆ ದರ್ಪಣದ ಮೇ ಲುದುರುಳಿ ಬೀಳ್ವಂತೆ ನಿಮಿಷದಿ ಬಿದ್ದುಹೋಗುವ ಕಾಯವೀ ತನುವೆಂಬ ಪಾಶದಲಿ ||
ಬದ್ಧನಾದೆನು ಮಮತೆಯಲಿ ನೀ ನಿದ್ಯುದಕೆ ಫಲವೇನು ಭಕ್ತವಿ ರುದ್ಯವಾಗದವೊಲು ರಕ್ಷಿಸು ನಮ್ಮನನವರತ || ೭೬ ||

ಕೇಳುವುದು ಕಡುಕಷ್ಟ ಕಷ್ಟದ ಬಾಳುವೆಯ ಬದುಕೇನು ಸುಡುಸುಡು ಗಾಳಿಗೊಡ್ಡಿದ ಸೊಡರು ಈ ಸಂಸಾರದೇಳಿಗೆಯು ||
ಬಾಳಬೇಕೆಂಬವಗೆ ನೆರೆ ನೀ ಮಳಿಗವ ಮಿಗೆ ಮಾಡಿ ಭಕ್ತಿಯೋ ಳಾಳಿ ಬದುಕುವುದುಚಿತ ರಕ್ಷಿಸು ನಮ್ಮನನವರತ || ೭೭ ||

ದೇಹಧಾರಕನಾಗಿ ಬಹುವಿಧ ಮೋಹದೇಳಿಗೆಯಾಗಿ ಮುಕುತಿಗೆ ಬಾಹಿರನು ವಿಷಯಾದಿಗಳಿಗೊಳಗಾಗಿ ||
ದೇಹವೀ ಸಂಸಾರವೆನ್ನದೆ ಮೋಹಿಸುವ ಮತಿಗೇಡಿ ಮಾನವ ಸಾಹಸಿಯೆ ಸಟೆಮಾತು ರಕ್ಷಿಸು ನಮ್ಮನನವರತ | ೭೮ ||

ಅಳಿವ ಒಡಲನು ನೆಚ್ಚಿವಿಷಯಂ ಗಳಿಗೆ ಕಾತುರನಾಗಿ ಮಿಗೆ ಕಳ ವಳಿಸಿ ಕಾಲನ ಬಳಿಗೆ ಹಂಗಿಗನಾಗಿ ಬಾಳುವರೆ ||
ತಿಳಿದು ಮನದೊಳು ನಿನ್ನ ನಾಮಾವಳಿಯ ಜಿಹ್ಯಗೆ ತಂದುಪಾಪವ ಕಳೆದ ಬದುಕೇ ಲೇಸು ರಕ್ಷಿಸು ನಮ್ಮನನವರತ || ೭೯ ||

ವರುಷ ನೂರಾಯುಷವದರೊಳ ಗಿರುಳು ಕಳೆದೈವತ್ತು ಐವ ಇರಲಿ ವಾರ್ಧಿಕ ಬಾಲ್ಕ ಕೌಮಾರದಲಿ ಮೂವತ್ತು ||
ಇರದೆ ಸಂದದು ಬಳಿಕ ಇಪ್ಪ ತೃರುಷವದರೊಳಗಾದುದಂತಃ ಕರಣ ನಿನ್ನೊಳು ತೋರಿ ರಕ್ಷಿಸು ನಮ್ಮನನವರತ || ೮೦ ||

ಊರು ತನಗೊಂದಿಲ್ಲ ಹೊತ್ತ ಶರೀರಗಳ ಮಿತಿಯಿಲ್ಲ ತಾ ಸಂ ಸಚ್ಚಾರಿಸ್ಕ ದಳವಿಲ್ಲ ನುಡಿಯದ ಭಾಷೆಮತ್ತಿಲ್ಲ ||
ಬೇರೆ ಹೊಸತೊಂದಿಲ್ಲ ಉಣ್ಯದ ಸಾರವಸ್ತುಗಳಿಯತನು ಸಂ ಚಾರವೀ ಬಗೆಯಾಯ್ತು ರಕ್ಷಿಸು ನಮ್ಮನನವರತ || ೮೦ ||

ಗೋಪುರದ ಭಾರವನು ಗಾರೆಯ ರೂಪದೋರಿದ ಪ್ರತಿಮೆಯಂದದೋ ಪರಿಯ ಸಂಸಾರಭಾರವನಾರು ತಾಳುವರು ||
ತಾ ಪರಾಕ್ರಮಿಯೆಂದು ಮನುಜನು ಕಾಪಥವನ್ನೆದುವನು ವಿಶ್ವ ವ್ಯಾಪಕನು ನೀನಹುದು ರಕ್ಷಿಸು ನಮ್ಮನನವರತ || ೮೨ ||

ಬೀಜವೃಕ್ಷದೊಳಾಯ್ತು ವೃಕ್ಷಕೆ ಬೀಜವಾರಿಂದಾಯ್ತು ಲೋಕದಿ ಬೀಜವೃಕ್ಷ ನ್ಯಾಯವಿದ ಭೇದಿಸುವರಾರಿನ್ನು ||
ಸೋಸಿಗವ ನೀ ಬಲ್ಲೆ ನಿನ್ನೊಳು ರಾಜಿಸುತ ಮೊಳದೂರುವದು ಸುರ ರಾಜನಂದನನಮಿತ ರಕ್ಷಿಸು ನಮ್ಮನನವರತ || ೮೩ ||

ತೊಗಲು ಬೊಂಬೆಗಳಂತೆ ನಾಲಕು ಬಗೆಯ ನಿರಾಣದಲಿ ಇದರೊಳು ನೆಗಳದೀ ಚೌಷಷ್ಟಿ ಲಕ್ಷಣ ಜಾತಿಧರ್ಮದಲಿ |
ಬಗೆಬಗೆಯ ನಾಮಾಂಕಿತದ ಜೀವಿಗಳದೆಲ್ಲವು ನಿನ್ನ ನಾಮದಿ ಜಗಕೆ ತೋರುತ್ತಿಹುದು ರಕ್ಷಿಸು ನಮ್ಮನನವರತ || ೮೪ ||

ಹೂಡಿದಲು ಮರಮುಟ್ಟು ಮಾಂಸದ ಗೋಡೆ ಚರ್ಮದ ಹೊದಿಕೆ ನರವಿನ ಕೂಡೆ ಹಿಂಡಿಗೆ ಬಿಗಿದ ಮನೆಯೋಳಾತ್ಮ ನೀನಿರಲು ||
ಬೀಡು ತೊಲಗಿದ ಬಳಿಕಲಾ ಸುಡು ಗಾಳಿನಲಿ ಬೆಂದುರಿವ ಕೊಂಪೆಯ ನೋಡಿ ನಂಬಿರಬಹುದೆ ರಕ್ಷಿಸು ನಮ್ಮನನವರತ || ೮೫ ||

ಬೀಗಮುದ್ರೆಗಳಿಲ್ಲದೂರಿಗೆ ಬಾಗಿಲುಗಳೊಂಬತ್ತು ಹಗಲಿರು ೪ಾಗಿ ಮುಚ್ಚದೆ ತೆರದಿಹುದು ಜೀವಾತ್ಮ ತಾನಿರುತ ||
ನೀಗಿ ಎಲ್ಲವ ಬಿಸುಟ್ಟು ಬೇಗದಿ ಹೋಗುತಿಹ ಸಮಯದಲಿ ಇರುವ ರಾಗಬಲ್ಲರೆ ನೀನೆ ರಕ್ಷಿಸು ನಮ್ಮನನವರತ || ೮೬ ||

ಕೀಲು ಬಿಲಿದಿಹದು ತಿರುಗುವ ಗಾಲಿಯರಡರ ರಥಕೆ ಗುಣ ಶೀಲನೋರ್ವನು ಸಂಚರಿಸುತಿಹನಾ ರಥಾಗ್ರಹದಲಿ ||
ಕೀಲು ಕಡೆಗೊಂದೂಡಿ ಬೀಳಲು ಕಾಲಗತಿ ತಪುವುದು ಅದರನು ಕೂಲ ನಿನೊಳಗಿಹುದು ರಕ್ಷಿಸು ನಮ್ಮನನವರತ || ೮೭ ||

ಬಿಗಿದ ರಕುತದ ರೋಮಕೂಪದ ತೊಗಲ ಕೋಟೆಯ ನಂಬಿ ರೋಗಾ ದಿಗಳ ಮುತ್ತಿಗೆ ಬಲಿದು ಜೀವನ ಪಿಡಿಯಲನುವಾಯ್ತು ||
ವಿಗಡ ಯಮನಾಳು ಬರುತಿರೆ ತೆಗೆದು ಕಾಲನ ಬಲವ ಬಲು ಮು ತ್ತಿಗೆಯನಿದ ಪರಿಹರಿಸಿ ರಕ್ಷಿಸು ನಮ್ಮನನವರತ || ೮೮ ||

ವಾರುಣಗಳೆಂಟೆಸೆವ ನಗರಕೆ ದ್ಯಾರವೊಂಬತ್ತನಕೆ ಬಲು ಮೊನೆ ಗಾರರಾದಾಳುಗಳ ಕಾವಲುಗಾರರನು ಮಾಡಿ ||
ಆರರಿಯದಂತರೋಳಗೆ ಹೃದ ಯಾರವಿಂದದಿ ನೀನಿರಲು ಬರಿ ದೂರ ನಿನಗುಂಟೆ ರಕ್ಷಿಸು ನಮ್ಮನನವರತ || ೮೯ ||

ಪೇಳಲಿನ್ನಳವಲ್ಲವೀಗೆಮ ನಾಳುಗಳು ನೆರೆಯಂಗದೇಶವ ಧಾಳಿಮಾಡುವರಕಟಕಟ ಸೆರೆ ಸೂರೆಗಳ ಪಿಡಿದು ||
ಕಾಳುಮಾಡುವರಿನ್ನು ತನುವಿದು ಬಾಳಲರಿಯದು ಕೋಟೆಯವರಿಗೆ ಕೊಳುಹೋಗದ ಮುನ್ನ ರಕ್ಷಿಸು ನಮ್ಮನನವರತ || ೯೦ ||

ನಾಲಿಗೆಯು ನಾಸಿಕವು ನಯನ ಕಪಾಲ ಪದ ಪಾಣಿಗಳ ತನುವಿನ ಮೂಲಕರ್ತವಿನಲಿ ಪರಿಚಾರಕರು ತಾವಾಗಿ ||
ಲೀಲೆಯಿಂದಿರುತಿರ್ದ ಕಡಯಲಿ ಕಾಲ ತೀರಿದ ಬಳಿಕಲದರನು ಕೂಲ ನಿನ್ನೊಳಗಿಹುದು ರಕ್ಷಿಸು ನಮ್ಮನನವರತ || ೯೦ ||

ಸತ್ತವರಿಗಲಲೇಕೆ ತನ್ನನ್ನು ಹೊತ್ತವರು ಹೆತ್ತವರುಗಳು ತಾ ಸತ್ತು ಹೋಗುವರಲ್ಲದುಳಿದವರೆ ಮರುಗಲೇಕಿನ್ನು ||
ಮೃತ್ಯು ಬೆನ್ನಿನೋಲಿಹುದು ತಾವಿ ನೃತ್ತು ಮಾಡುವುದೇನು ಪೂರ್ವದ ತೆತ್ತಿಗನು ನೀನೀಗ ರಕ್ಷಿಸು ನಮ್ಮನನವರತ || ೯೨ ||

ಮಣ್ಣು ಮಣ್ಣಿನೊಳುದಿಸಿರಲು ಮಣ್ಣು ಗೊಂಬೆಗಳಾಗಿ ರಂಜಿಸಿ ಮನಾಹಾರದಲಿ ಜೀವವ ಹೊರೆದು ಉಪಚರಿಸಿ |
ಮಣಿನಲಿ ಬಂಧಿಸಿದ ದೇಹವ ಮಣ್ಣುಗೂಡಿಸಬೇಡ ಜ್ಞಾನದ ಕಣ್ಯದೃಷ್ಟಿಯನ್ನಿತ್ತು ರಕ್ಷಿಸು ನಮ್ಮನನವರತ || ೯೩ ||

ಬೀಯವಾಗುವ ತನುವಿನಲಿ ನಿ ರ್ದಾಯಕನು ನೀನಿರ್ದು ಅತಿ ಹಿರಿ ದಾಯ ಸಂಬಡಿಸುವರೆ ನೀನನುಕೂಲವಾಗಿರ್ದು ||
ತಾಯನಗಲಿದ ಶಿಶುವಿನಂದದಿ ಬಾಯಬಿಡುವಂತಾಯ್ತಲೇ ಚಿಂತಾ ದಾಯಕನೆ ಬಿಡಬೇಡ ರಕ್ಷಿಸು ನಮ್ಮನನವರತ || ೯೪ ||

ಮೊದಲು ಜನನರಿಯ ಮರಣಿದ ಹದನ ಕಡೆಯಲಿ ತಿಳಿಯೆ ನಾನು ಮದ್ಯದಲಿ ನೆರೆ ನಿಪುಣನೆಂಬುದು ಬಳಿಕ ನಗೆಗೇಡು ||
ಮೊದಲುಕಡೆ ಮಧ್ಯಗಳ ಬಲ್ಲವ ಮದನಜನಕನು ನೀನು ನಿನ್ನಯ ಪದಯುಗವ ಬಯಸುವೆನು ರಕ್ಷಿಸು ನಮ್ಮನನವರತ || ೯೫ ||

ಸಾರವಿಲ್ಲದ ದೇಹವಿದು ನಿ ಸ್ವಾರವಾಗಿಹ ತನುವಿನಲಿ ಸಂ ಚಾರಿಯಾಗಿಹ ನೀನಿದ್ದು ಕಡೆಯಲಿ ತೊಲಗಿ ಹೋಗುತಲಿ ||
ದೂರ ತಪ್ಪಿಸಿಕೊಂಡು ಬರಿಯಪ ದೂರ ಹೊರಿಸಿದೆ ಜೀವನದಲಿ ಇದ ನಾರು ಮೆಚ್ಚುವರಕಟ ರಕ್ಷಿಸು ನಮ್ಮನನವರತ || ೯೬ ||

ಅಂಡವೆರಡುದ್ಭವಿಸಿದವು ಬ್ರಹ್ಮಾಂಡವದರೋಪಾದಿಯಲಿ ಪಿಂ ಡಾಂಡವೆಸೆದುದು ಸೂಲಕಾರಣ ಸೂಕ್ಷತನುವಿನಲಿ ||
ಅಂಡ ನಿನ್ನಯ ರೋಮಕೂಪದೊ ಳಂಡಲದವಖಿಲಾಂಡವಿದು ಬ್ರು ಹ್ಯಾಂಡನಾಯಕ ನೀನು ರಕ್ಷಿಸು ನಮ್ಮನನವರತ || ೯೭ ||

ಒಂದು ದಿನ ತನುವಿನಲಿ ನಡೆವುದು ಭಾಸ್ಕರಸ್ವರಗಳಿಪ್ಪ ತೊಂದು ಸಾವಿರದಾನೂರನು ಏಳುಭಾಗದಲಿ ||
ಬಂದದನು ಉಡುಚಕ್ರದಲ್ಲಿಗೆ ತಂದು ಧಾರೆಯನೆರೆದ ಮುನಿಕುಲ ವೃಂದಹೃದಯನು ನೀನು ರಕ್ಷಿಸು ನಮ್ಮನನವರತ || ೯೮ ||

ತೊಲಗುವರು ಕಡೆಕಡೆ ತಾ ಹೋಲೆ ಹೊಲೆನುತ ಕಳವಳಿಸಿ ಮೂತ್ರದ ಬಿಲದೊಳಗೆ ಬಂದಿಹುದು ಕಾಣ ಬರಿದೆ ಮನನೊಂದು ||
ಜಲದೊಳಗೆ ಮುಳುಗಿದರೆ ತೊಲಗದು ಹೊಲಗೆಲಸವೀದೇಹದೊಳು ನೀ ನೆಲೆಸಿರಲು ಹೊಲೆಯುಂಡೆ ರಕ್ಷಿಸು ನಮ್ಮನನವರತ || ೯೯ ||

ಬರಿದಹಂಕಾರದಲಿ ತತ್ಯದ ಕುರುಹ ಕಾಣದೆ ನಿನ್ನ ದಾಸರ ಜರೆದು ವೇದ ಪುರಾಣ ಶಾಸ್ತ್ರಗಳೊದಿ ಫಲವೇನು ||
ನರರು ದುಷ್ಕರ್ಮದಲಿ ಮಾಡಿದ ದುರಿತವಡಗಲು ನಿನ್ನ ನಾಮ ಸ್ಮರಣೆಯೊಂದೇ ಸಾಕು ರಕ್ಷಿಸು ನಮ್ಮನನವರತ || ೧೦೦ ||

ಎಂಜಲೆಂಜಲು ಎಂಬರಾನುಡಿ ಎಂಜಲಲ್ಲವೆ ವಾರಿ ಜಲಚರ ಎಂಜಲಲ್ಲವೆ ಹಾಲು ಕರುವಿನ ಎಂಜಲೆನಿಸಿರದೆ ||
ಎಂಜಲೆಲಿಯನೆಲ್ಲಯುಂ ಪರ ರೆಂಜಲಲ್ಲದೆ ಬೇರೆ ಭಾವಿಸ ಲೆಂಜಲುಂಟೇ ದೇವ ರಕ್ಷಿಸು ನಮ್ಮನನವರತ || ೧೦೧ ||

ಕೇಳುವುದು ಹರಿಕಥೆಯ ಕೇಳಲು ಹೇಳುವುದು ಹರಿಭಕ್ತಿ ಮನದಲಿ ತಾಳುವುದು ಹಿರಿಯದಾಗಿ ನಿನ್ನಯ ಚರಣಸೇವೆಯಲಿ ||
ಊಳಿಗವ ಮಾಡುವುದು ವಿಷಯವ ಹೂಳುವುದು ನಿಜಮುಕ್ತಿ ಕಾಂತೆಯ ನಾಳುವುದು ಕೃಪೆಮಾಡಿ ರಕ್ಷಿಸು ನಮ್ಮನನವರತ || ೧೦೨ ||

ಈ ತೆರೆದೋಳಚ್ಚುತನ ನಾಮದ ನೂತನದಿ ವಸುಧಾತಲದಿ ವಿ ಖ್ಯಾತಿ ಬಯಸದೆ ಬಣ್ಣಿಸಿದೆ ಭಾಮಿನಿಯ ವೃತದಲಿ ತಾನು ||
ನೀತಿಕೋವಿದರಾಲಿಸುವದತಿ ಪ್ರೀತಿಯಲಿ ಕೇಳವರಿಗೆ ಅಸುರಾ ರಾತಿ ಚೆನ್ನಿಗರಾಯ ಸುಖಗಳವನನವರತ || ೧೦೩ ||

ಬಾದರಾಯಣ ಪೇಳ ಭಾರತಕಾದಿಕರ್ತನು ದಾರ ಶ್ರೀಪುರ ದಾದಿ ಕೇಶವಮೂರ್ತಿಗಂಕಿತವಾದ ಚರಿತೆಯನು ||
ಮೇದಿನಿಯೊಳಿದನಾರು ಹೃದಯದೊ ಳಾದರಿಸಿ ಕೇಳ್ಪರು ಮುದದಲಿ ಯಾದಿಮೂರುತಿ ವರಪುರಾಧಿಪನೊಲಿವನನವರತ || ೧೦೪ ||

ಕುಲಗಿರಿಗಳನ್ವಯವ ಧಾರಿಣಿ ಜಲದ ಪಾವಕ ಮರುತ ಜಲ ನಭ ಜಲಜಸಖ ಶೀತಾಂಶು ತಾರೆಗಳುಳ್ಳ ಪರಿಯಂತ ||
ಚಲನೆಯಿಲ್ಲದೆ ನಿನ್ನ ಚರಿತೆಯು ಒಲಿದು ಧರೆಯೊಳಗೊಪ್ಪುವಂದದಿ ಚಲುವ ಚೆನ್ನಿಗರಾಯ ರಕ್ಷಿಸು ನಮ್ಮನನವರತ || ೧೦೫ ||

ನೂರುಕನ್ಯಾದಾನವನು ಭಾ ಗೀರಥಿಸ್ಕಾನವನು ಮಿಗೆ ಕೈ ಯಾರ ಗೋವಳ ಪ್ರೇಮದಿಂದಲಿ ಭೂಸುರರಿಗೊಲಿದು ||
ಊರುಗಳನೂರಗ್ರಹಾರವ ಧಾರೆಯೆರದಿತ್ತಂತೆ ಫಲ ಕೈ ಸೇರುವುದು ಹರಿಭಕ್ತಿಸಾರದ ಕಥೆಯ ಕೇಳ್ಳವರಿಗೆ || ೧೦೬ ||

ಮೇರು ಮಂದರನಿಭಸುವರ್ಣವ ವಾರಿ ಮಧ್ಯದೊಳಿರುವ ಅವನಿಯ ನಾರಿಯರ ಗಾಯತ್ರಿ ಪಶುಗಳನ್ನಿತ್ತ ಫಲವಹುದು ||
ಧಾರುಣಿಯೊಳೀ ಭಕ್ತಿಸಾರವ ನಾರು ಓದುವವರಿಗನುದಿನ ಚಾರುವರಗಳನ್ನಿತ್ತು ರಕ್ಷಿಪನಾದಿಕೇಶವನು || ೧೦೭ ||

ಲೋಕದೊಳಗತ್ಯಧಿಕವೆನಿಸುವ ಕಾಗಿನೆಲೆಸಿರಿಯಾದಿಕೇಶವ ತಾ ಕೃಪೆಯೊಳಗೆ ನುಡಿದನು ಈ ಭಕ್ತಿಸಾರವನು ||
ಜೋಕೆಯಲಿ ಬರೆದೋದಿಕೇಳರ ನಾಕುಲದಿ ಮಾಧವನು ಕರುಣಿಪ ಶ್ರೀಕಮಲವಲ್ಲಭನು ಮಿಗೆ ಬಿಡದಾದಿಕೇಶವನು || ೧೦೮ ||

ನಿಮ್ಮದೊಂದು ಉತ್ತರ

*

This site uses Akismet to reduce spam. Learn how your comment data is processed.